|| ಶ್ರೀ ರಾಮ ಜಯ ರಾಮ ಜಯ ಜಯ ರಾಮ ||

Sunday, July 17, 2011

ಅಯ್ಯೋ! ಎನ್ನದ ಮನವೇಕೆ?....


ಮಾನವೀಯತೆಯ ಮುಖಗಳು ಹಲವಾರು. ಬಹಳಷ್ಟು ಸನ್ನಿವೇಶಗಳಲ್ಲಿ ಅದು ಸಂದರ್ಭೋಚಿತವಾಗಿ ಪ್ರಕಟವಾಗುವಂತಹುದು. ಮಾನವೀಯತೆ ಮೆರೆಯ ಬೇಕಾದರೆ ಮನುಷ್ಯನ ಸಂವೇದನಾಶೀಲ ಪ್ರವೃತ್ತಿ ಕೂಡ ಸದಾ ಜಾಗೃತವಾಗಿರಬೇಕು. ಅದಕ್ಕೊಂದು ಉದಾಹರಣೆ.

ನಾನು ವಿಧಾನಸೌಧದಲ್ಲಿ ಓರ್ವ ಹಿರಿಯ ಐ.ಎ.ಎಸ್. ಅಧಿಕಾರಿಯ ಆಪ್ತ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾಲ. ಅತ್ಯಂತ ಜವಾಬ್ದಾರಿಯುತ ಕಛೇರಿಯಾಗಿದ್ದರಿಂದ ಕಾರ್ಯಬಾಹುಳ್ಯವೂ ಅತ್ಯಧಿಕ. ಹಾಗಾಗಿ ಪ್ರತಿದಿನ ಬೆಳಿಗ್ಗೆ 8 ಘಂಟೆಗೆ ಕಛೇರಿಗೆ ಹೋದರೆ ಮನೆ ಸೇರುವುದು ರಾತ್ರಿ 9ರ ನಂತರವೇ. ಒಮ್ಮೊಮ್ಮೆ ರಾತ್ರಿ 12-1 ಘಂಟೆಯೂ ಆಗುತ್ತಿತ್ತು. ಒಂದು ದಿನ ರಾತ್ರಿ 8  ಘಂಟೆಗೆ  ಸಚಿವರ ನಿವಾಸಕ್ಕೆ ಸಭೆಗಾಗಿ ನನ್ನ ಬಾಸ್ ತೆರಳಿದ್ದರು. ವಾಪಸ್ಸು ಬಂದಾಗ ರಾತ್ರಿ 12 ಆಗಿತ್ತು. ನಮಗೋ ಸಾಕಷ್ಟು  ಹಸಿವಾಗಿ ಮನೆ ಸೇರಿದರೆ ಸಾಕಪ್ಪಾ ಎಂದೆನಿಸುತ್ತಿತ್ತು. ಬಾಸ್ ಬಂದ ಕೂಡಲೇ ಮನೆಗೆ ತೆರಳಲು ಸಿದ್ಧರಾದೆವು. ಅವರನ್ನು ಬೀಳ್ಕೊಟ್ಟು ನಾವು ಹೊರಡಲು ಅವರೊಂದಿಗೆ ಪೋರ್ಟಿಕೋಗೆ ಬಂದೆವು. ಆಗ ವಿಪರೀತ ಮಳೆ ಬೇರೆ ಸುರಿಯುತ್ತಿತ್ತು. ಬಾಸ್ ಕಾರಿನ ಒಳಗೆ ಕುಳಿತ ತಕ್ಷಣ ಬಾಗಿಲು ಪುನ: ತೆರೆದುಕೊಂಡು ಹೊರಬಂದರು. ನಾವುಗಳು ಇನ್ನೇನು ಜ್ಞಾಪಿಸಿಕೊಂಡರಪ್ಪಾ, ಇನ್ನೇನು ಕೆಲಸ ಇದೆಯೋ ಎಂದುಕೊಳ್ಳುವಷ್ಟರಲ್ಲಿ, ಪಕ್ಕದಲ್ಲೇ ನಿಂತಿದ್ದ ಪೋಲಿಸಿನವನನ್ನು ಕರೆದು ಬಾಸ್ ಇಂತೆಂದರು: "ನೋಡಿ, ಪೋರ್ಟಿಕೋದ ಆ ಮೂಲೆಯಲ್ಲಿ ಒದ್ದೆಯಾದ ನಾಯಿಯೊಂದು ಮುದುರಿಕೊಂಡು ಮಲಗಿದೆ. ಅದನ್ನು ಓಡಿಸಬೇಡಿ. ಅದು ಹೋದಾಗ ಹೋಗಲಿ" ಎಂದು ಹೇಳಿ ಪುನ: ಕಾರ್ ಹತ್ತಿ ಹೊರಟರು. 

ರಾತ್ರಿ 12ರ ಸಮಯ; ಜೋರಾದ ಮಳೆ; ತೀವ್ರವಾದ ಹಸಿವು; ಮನೆ ಸೇರಿದರೆ ಸಾಕಪ್ಪಾ ಎನ್ನುವಷ್ಟು ಆಯಾಸ - ಈ ಸಂದರ್ಭದಲ್ಲಿ ನನ್ನ ಬಾಸ್ ಒಂದು ಪ್ರಾಣಿಗೆ ತೋರಿದ ಅನುಕಂಪ ಮತ್ತು ಕಾಳಜಿ ಒಂದು ಕ್ಷಣ ನಮ್ಮೆಲ್ಲರ ಹಸಿವು-ಆಯಾಸವನ್ನು ಮರೆಸಿ ಅವರಲ್ಲಿ ಅನನ್ಯ ಗೌರವ ಭಾವವನ್ನು ತುಂಬಿತ್ತು.

[ಮುಂದುವರೆಯುವುದು]

4 comments:

 1. ವಿಧಾನಸೌಧದಲ್ಲೂ ಅಂತಹ ಅಧಿಕಾರಿಗಳು ಇದ್ದರೆಂದರೆ ಆಶ್ಚರ್ಯವಾಗುತ್ತದೆ! ಮನುಷ್ಯರಲ್ಲಿ ಎಲ್ಲಿಯವರೆಗೆ ಕೆಟ್ಟವರಿರುತ್ತಾರೋ ಅಷ್ಟೇ ಒಳ್ಳೆಯವರೂ ಇರುತ್ತಾರೆ ಎಂಬುದಕ್ಕೆ ಇದು ನಿದರ್ಶನ, ಪ್ರಾಣಿ ದಯೆಯುಳ್ಳ ಅವರು ಇಂದಿಗೂ ಇರಬಹುದಲ್ಲವೇ ?

  ReplyDelete
 2. Definitely he is still working in Vidhana Soudha; holding the highest post of beauracracy! He is an embodiment of all good qualities; a walking GOD as for as I am concerned.

  ReplyDelete
 3. ಒಳ್ಳೆಯ ಕೆಲಸ, ಸುರೇಶ. ಈ ಅಧಿಕಾರಿಯ ಬಗ್ಗೆ ಹೇಳಬೇಕಾದ, ಹೇಳಬಹುದಾದ ಸಂಗತಿಗಳು ಹಲವಿದ್ದು, ಈ ಆದರ್ಶ ವ್ಯಕ್ತಿಯ ಪರಿಚಯಮಾಲಿಕೆ ಮುಂದುವರೆಸು.

  ReplyDelete
 4. ರಾಜು, ಸಲಹೆಗೆ ಧನ್ಯವಾದಗಳು. ನಾನು ಆ ಪ್ರಯತ್ನದಲ್ಲಿದ್ದೇನೆ.

  ReplyDelete