|| ಶ್ರೀ ರಾಮ ಜಯ ರಾಮ ಜಯ ಜಯ ರಾಮ ||

Wednesday, March 2, 2011


ಬನ್ನಿ, ನಾವೂ ಕೈ ಜೋಡಿಸೋಣ...............................

3 comments:

  1. ಸತ್ಕಾರ್ಯಗಳಿಗೆ ಕೈಜೋಡಿಸುವ ಸಹೃದಯಿಗಳು ಬೇಕಾಗಿದ್ದಾರೆ. ಆದರೆ ಸತ್ಕಾರ್ಯಗಳಿಗೆ ಕೈಜೋಡಿಸುವ ಜನರಿಲ್ಲವೇ? ಖಂಡಿತಾ ಇದ್ದಾರೆ.ಆದರೆ ಸತ್ಕಾರ್ಯದ ವಿವರಣೆ ಒಬ್ಬೊಬ್ಬರಿಗೆ ಒಂದೊಂದು ರೀತಿಯಾಗಿರುತ್ತೆ.ಉಧಾಹರಣೆಗೆ ಈಗ ಎಲ್ಲೆಲ್ಲೂ ದೇವಾಲಯಗಳನ್ನು ಕಟ್ಟುವ ಕಾಲ. ಕೋಟಿ ಕೋಟಿ ರೂಪಾಯಿ ಖರ್ಚುಮಾಡಿ ದೇವಾಲಯ ಕಟ್ಟಲು ಕೈ ಜೋಡಿಸುವ ಜನರಿದ್ದಾರೆ. ಆದರೆ ಹೊತ್ತಿನ ತುತ್ತಿಗೆ ಪರಿತಪಿಸುವ ಜನರು ಈಗಲೂ ಇದ್ದಾರೆ. ಆತ್ಮವತ್ ಸರ್ವಭೂತೇಶು ಎನ್ನುವ ನಾವು ಇಂತವರ ಬಗ್ಗೆ ಕಿಂಚಿತ್ ಯೋಚಿಸುತ್ತೇವೆಯೇ? ಎಂಬುದು ಪ್ರಶ್ನೆಯಾಗಿಯೇ ಉಳಿಯುತ್ತೆ. ಇಲ್ಲಿ ಮತ್ತೆ ಪ್ರಶ್ನೆ ಹುಟ್ಟುತ್ತದೆ- ದೇವಾಲಯ ಕಟ್ಟಬೇಕಾ? ಅಥವಾ ಹೊತ್ತಿನ ತುತ್ತಿಗೆ ಪರಿತಪಿಸುವ ಜನರಿಗೆ ಕಿಂಚಿತ್ ನೆರವಾಗಬೇಕಾ? ಯಾವುದು ಭಗವಂತನ ಕೆಲಸ? ಹೀಗೂ ಹೇಳುವ ಜನರಿದ್ದಾರೆ" ಅವನಿಗೆ ಹೊತ್ತಿನ ತುತ್ತಿಗೆ ಗತಿ ಇಲ್ಲವೆಂದರೆ ಅವನು ಸೋಮಾರಿ ಎಂದಾಯ್ತು. ಅವನ ಬಗ್ಗೆ ಮರುಗಬಾರದು!! ಆದರೆ ಎಲ್ಲರೂ ಸೋಮಾರಿಗಳಾಗಿರುವುದಿಲ್ಲ. ಕೆಲವರಿಗೆ ದುಡಿಯುವ ಸಾಮರ್ಥ್ಯವನ್ನೇ ದೇವರು ಕಿತ್ತುಕೊಂಡಿರುತ್ತಾನಲ್ಲಾ! ಅಂತವರ ಬಗ್ಗೆ ಮರುಗಬೇಡವೇ?........ಚಿತ್ರ ನೋಡಿದಾಗ ಹೀಗೆ ಹಲವು ಚಿಂತನೆಗಳು ಮನದಲ್ಲಿ ಮೂಡಿಬಂತು.ಯಥಾವತ್ತಾಗಿ ಪ್ರತಿಕ್ರಿಯಿಸಿದೆ, ಅಷ್ಟೆ.

    ReplyDelete
  2. ಚಿಂತನೆ ಚೆನ್ನಾಗಿದೆ. ದ್ವಂದ್ವ, ಜಿಜ್ಞಾಸೆಗಳು ಜಾಸ್ತಿಯಾದಾಗ, ನನ್ನ ದೃಷ್ಡಿಯಲ್ಲಿ, ಅದು ನಮ್ಮ ನೈಜ ಜೀವನಶೈಲಿ ಮತ್ತು ಗುರಿಯ ಮೇಲೆ ಪರಿಣಾಮ ಬೀರುತ್ತದೆ. ಸಂಘರ್ಷಗಳನ್ನು ಆದಷ್ಟೂ ಕಡಿಮೆ ಮಾಡಿಕೊಂಡು, ಆ ಕ್ಷಣಕ್ಕೆ, ಆತ್ಮಕ್ಕೆ ಸರಿಯೆನಿಸುವಂತೆ ಮುನ್ನಡೆಯುವತ್ತ ಗಮನವಿದ್ದಲ್ಲಿ, ಬಹುಶ: ಅಲ್ಪಸ್ವಲ್ಪ ಉಳಿದ ಕಾಲದಲ್ಲಿ ನೆಮ್ಮದಿ ಕಾಣುವ ಪ್ರಯತ್ನಕ್ಕೆ ಸಹಾಯಕವಾಗಬಹುದು. ನಮ್ಮ ಸುತ್ತಮುತ್ತಲಿನ ಪರಿಸರಕ್ಕೆ ಪೂರಕವಾಗಿ ಸ್ಪಂದಿಸುವ ಮಾನವೀಯತೆ ನಮ್ಮದಾದರೆ ಅಷ್ಟೇ ದೊಡ್ಡದು. ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  3. [ಸಂಘರ್ಷಗಳನ್ನು ಆದಷ್ಟೂ ಕಡಿಮೆ ಮಾಡಿಕೊಂಡು]
    ಇದಕ್ಕೆ ನನ್ನ ಸಹಮತವಿದೆ. ಚಿತ್ರ ನೋಡಿದಾಗ ಬಂದ ಅನಿಸಿಕೆಗಳನ್ನು ಬರೆದೆ ಅಷ್ಟೆ.ಯಾರ್ಯಾರಿಗೆ ಯಾವ್ಯಾವುದು ಹಿತವಾಗಿ ಕಾಣುತ್ತದೋ ಅದನ್ನು ಅವರು ಮಾಡಿದರೆ ಅವರಿಗೆ ನೆಮ್ಮದಿ, ತೃಪ್ತಿ ಸಿಗುತ್ತೆ. ಯಾರಮೇಲೂ ನಾವು ಬೆರಳು ತೋರಿಸುವಂತಿಲ್ಲ. ಎಲ್ಲಾ ಅವರವರ ಇಚ್ಛೆ. ಅಂದಹಾಗೆ ಸ್ವಾಮಿ ನಿರ್ಭಯಾನಂದರು ಹೇಳಿದ ಒಂದು ಮಾತು ನೆನಪಿಗೆ ಬರುತ್ತೆ- " ರಾಮಕೃಷ್ಣಾಶ್ರಮದ ದೊಡ್ದ ದೊಡ್ದ ಕಟ್ಟಡವನ್ನು ಕಟ್ಟುವಾಗ ಅನೇಕರು ಹೇಳುತ್ತಾರೆ, ಈ ಸನ್ಯಾಸಿಗಳಿಗೇಕೆ ಇಂತಾ ದೊಡ್ದ ದೊಡ್ದ ಕಟ್ಟಡಗಳ ಹುಚ್ಚು?" ಆಗ ನಾನು ಕೇಳುತ್ತೇನೆ" ಹೆಂಡದಂಗಡಿ, ಬಾರ್ ಗಳಿಗಾಗಿ ಎಷ್ಟೇ ಭವ್ಯವಾದ ಕಟ್ಟದ ಕಟ್ಟಿದರೂ ಕಣ್ಮುಚ್ಚುವ ನೀವು ಹೆಚ್ಚು ಜನರಿಗೆ ಸಂಸ್ಕಾರ ಕೊಡಲು ದೊಡ್ದ ದೊಡ್ಡ ಕಟ್ಟಡಗಳನ್ನು ಕಟ್ಟಿದರೆ ನಿಮಗೆ ಕಣ್ಣುರಿಯೇಕೆ?

    ನಿಜವಾಗಲೂ ಯೋಚನೆ ಮಾಡಬೇಕಾದ ಸಂಗತಿ.ನಾನು ದೇವಾಲಯ ಕಟ್ಟುವ ವಿಚಾರ ಹೇಳಿದಾಗಲೂ ನಿರ್ಭಯಾನಂದರ ಮಾತು ನನ್ನ ಬಾಯಿಗೆ ಬೀಗ ಹಾಕುತ್ತೆ. ನಿಜವಾಗಲೂ ಅವರವರ ಮನಸ್ಸಿಗೆ ಒಪ್ಪುವಂತೆ ಮಾಡಲು ಎಲ್ಲರೂ ಸ್ವತಂತ್ರರು. ಏನಾದರಾಗಲೀ ಸಮಾಜಕ್ಕೆ ಒಳ್ಳೆಯದನ್ನು ಮಾಡುವ ದೃಷ್ಟಿಯಿಂದಲೇ ಅವರಿಗೆ ತೋಚಿದಂತೆ ಮಾಡುತ್ತಾರೆ. ಪ್ರತಿಕ್ರಿಯೆ ಉದ್ದವಾಯ್ತು. ಆದರೂ ನನ್ನ ಮನದ ಮಾತು ಹೊರಬರಬೇಕಲ್ಲಾ!!

    ReplyDelete