|| ಶ್ರೀ ರಾಮ ಜಯ ರಾಮ ಜಯ ಜಯ ರಾಮ ||

Friday, November 12, 2010

ಹೀಗೇಕೆ...?? (ಮುಂದುವರೆದುದು)

* Software ಮತ್ತು hardware  ಭರಾಟೆಯಲ್ಲಿ ಬಹು ಜನರಾಗಿದ್ದಾರೆ footware!

* ಮನೆ ನಾಯಿಗೆ ನಿತ್ಯ ಸ್ನಾನ, ಸತ್ವಯುತ ಭೋಜನ; ಕಾರಿಗುಂಟು ನಿತ್ಯ ಸ್ನಾನ, ಕಾಲಕಾಲಕ್ಕೆ ನವೀಕರಣ; ಮನೆ ಯಜಮಾನನಿಗೆ ಪುರಸೊತ್ತಿಲ್ಲ ಉಣ್ಣಲು ನೆಮ್ಮದಿಯ ಭೋಜನ ಮತ್ತು ಕಾಪಾಡಲು ತನ್ನದೇ ದೇಹದ ಸ್ವಾಸ್ಥ್ಯವ;

* ಮನೆ ವಾರ್ತೆಗೆ ಸಮಯವುಂಟು, ತಲೆಹರಟೆಗೆ ಸಮಯವುಂಟು, ಪರಟೀಕೆಗೆ ಸಮಯವುಂಟು, ಮನೋರಂಜನೆಗೆ ಸಮಯವುಂಟು ಆದರೆ ಅಲ್ಪಕಾಲವಾದರೂ ಜಪ-ತಪ ಮಾಡಲು ಸಮಯವೆಲ್ಲುಂಟು?

* ಹಣ ಮತ್ತು ಚಿನ್ನಾಭರಣಗಳ ಜೊತೆಗೆ ಪ್ರೀತಿ, ವಾತ್ಸಲ್ಯ, ಪರಸ್ಪರ ಸ್ಪಂದನೆ, ಕಳಕಳಿ ಎಲ್ಲವೂ ಬ್ಯಾಂಕ್ ಲಾಕರ್ ಪಾಲು!

* ಕಷ್ಟಪಟ್ಟು ಸಪೋಟ ಹಣ್ಣು ಬೆಳೆದವಗೆ ಕೆ.ಜಿ.ಗೆ 10 ರುಪಾಯಿ; ಅದನ್ನು ಕೊಂಡು ಮಾರುವವ ಸಂಪಾದಿಸುತ್ತಾನೆ ಕೆ.ಜಿ.ಗೆ 30 ರುಪಾಯಿ! (ಬಹುತೇಕ ಎಲ್ಲ ರೈತರ ಇಂದಿನ ಪಾಡು)

* ಪ್ರಪಂಚವೇ 'ನೀನು ತಪ್ಪಿತಸ್ಥ' ಎಂದು ಸಾಕ್ಷಾಸಮೇತ ಕರೆದರೂ,  ಒಪ್ಪಿಕೊಳ್ಳದ ಏಕೈಕ ವ್ಯಕ್ತಿಯೆಂದರೆ ರಾಜಕಾರಣಿ!

* ಪರರ ಏಳಿಗೆಯ ಬಗ್ಗೆ, ಪರರ ಸಾಧನೆಯ ಬಗ್ಗೆ, ಪರರ ಉಚಿತಾನುಚಿತಗಳ ಬಗ್ಗೆ, ಪರರ ವೇಷಭೂಷಣಗಳ ಬಗ್ಗೆ, ಪರರ ಚಟುವಟಿಕೆಗಳ ಬಗ್ಗೆ ಚಿಂತೆಗೇ ನಮ್ಮ ಬಹುಪಾಲು ಸಮಯ ಮೀಸಲು! 

[ಮುಂದುವರೆಯುವುದು]


3 comments:

  1. ಅನುಭವದ ಮಾತುಗಳು!

    ReplyDelete
  2. ಆಧ್ಯಾತ್ಮ, ಸನ್ಮಾರ್ಗ, ಒಳ್ಳೆಯತನ ಎಲ್ಲರಿಂದಲೂ ನಾವು ಬಯಸಲು ಸಾಧ್ಯವಿಲ್ಲ, ಇಂದಿನ ದಿನ ಒಂದಷ್ಟು ದುಡ್ಡುಮಾಡಬೇಕು;ಮಜಾಮಾಡಬೇಕು --ಇದೇ ಮೂಲತತ್ವಾಗಿ ಮಿಕ್ಕುಳಿದ ಎಲ್ಲವೂ ಗೌಣವಾಗಿದೆ.ಕೃಷಿಕನಿಗೂ ಕೃಷಿ ಉತ್ಫನ್ನಗಳಿಗೂ ಸಿಗುವ ಬೆಲೆಗಿಂತ ಮಧ್ಯವರ್ತಿಗಳು ಹೆಚ್ಚು ಗಳಿಸುತ್ತಿರುವುದು ವ್ಯವಹಾರದ ವಿಪರ್ಯಾಸ, ಒಮ್ಮೊಮ್ಮೆ ಅನಿಸುತ್ತದೆ: ಬಾರ್ಟರ್ ಸಿಸ್ಟಮ್ ಆದರೇ ಚೆನ್ನಾಗಿರುತ್ತಿತ್ತೇನೋ ಅಂತ, ಅನುಭವದಿಂದ ಬರೆದಿದ್ದೀರಿ, ಮುನ್ನಡೆಯಲಿ ಗಾಡಿ-ಶುಭಕೋರುತ್ತೇನೆ

    ReplyDelete
  3. ಅಣ್ಣ ರಾಜುಗೆ ಮತ್ತು ಶ್ರೀ ಭಟ್ ರವರಿಗೆ ಪ್ರೋತ್ಸಾಹದ ನುಡಿಗಳಿಗಾಗಿ ಧನ್ಯವಾದಗಳು.

    ReplyDelete