* Software ಮತ್ತು hardware ಭರಾಟೆಯಲ್ಲಿ ಬಹು ಜನರಾಗಿದ್ದಾರೆ footware!
* ಮನೆ ನಾಯಿಗೆ ನಿತ್ಯ ಸ್ನಾನ, ಸತ್ವಯುತ ಭೋಜನ; ಕಾರಿಗುಂಟು ನಿತ್ಯ ಸ್ನಾನ, ಕಾಲಕಾಲಕ್ಕೆ ನವೀಕರಣ; ಮನೆ ಯಜಮಾನನಿಗೆ ಪುರಸೊತ್ತಿಲ್ಲ ಉಣ್ಣಲು ನೆಮ್ಮದಿಯ ಭೋಜನ ಮತ್ತು ಕಾಪಾಡಲು ತನ್ನದೇ ದೇಹದ ಸ್ವಾಸ್ಥ್ಯವ;
* ಮನೆ ವಾರ್ತೆಗೆ ಸಮಯವುಂಟು, ತಲೆಹರಟೆಗೆ ಸಮಯವುಂಟು, ಪರಟೀಕೆಗೆ ಸಮಯವುಂಟು, ಮನೋರಂಜನೆಗೆ ಸಮಯವುಂಟು ಆದರೆ ಅಲ್ಪಕಾಲವಾದರೂ ಜಪ-ತಪ ಮಾಡಲು ಸಮಯವೆಲ್ಲುಂಟು?
* ಹಣ ಮತ್ತು ಚಿನ್ನಾಭರಣಗಳ ಜೊತೆಗೆ ಪ್ರೀತಿ, ವಾತ್ಸಲ್ಯ, ಪರಸ್ಪರ ಸ್ಪಂದನೆ, ಕಳಕಳಿ ಎಲ್ಲವೂ ಬ್ಯಾಂಕ್ ಲಾಕರ್ ಪಾಲು!
* ಕಷ್ಟಪಟ್ಟು ಸಪೋಟ ಹಣ್ಣು ಬೆಳೆದವಗೆ ಕೆ.ಜಿ.ಗೆ 10 ರುಪಾಯಿ; ಅದನ್ನು ಕೊಂಡು ಮಾರುವವ ಸಂಪಾದಿಸುತ್ತಾನೆ ಕೆ.ಜಿ.ಗೆ 30 ರುಪಾಯಿ! (ಬಹುತೇಕ ಎಲ್ಲ ರೈತರ ಇಂದಿನ ಪಾಡು)
* ಪ್ರಪಂಚವೇ 'ನೀನು ತಪ್ಪಿತಸ್ಥ' ಎಂದು ಸಾಕ್ಷಾಸಮೇತ ಕರೆದರೂ, ಒಪ್ಪಿಕೊಳ್ಳದ ಏಕೈಕ ವ್ಯಕ್ತಿಯೆಂದರೆ ರಾಜಕಾರಣಿ!
* ಪರರ ಏಳಿಗೆಯ ಬಗ್ಗೆ, ಪರರ ಸಾಧನೆಯ ಬಗ್ಗೆ, ಪರರ ಉಚಿತಾನುಚಿತಗಳ ಬಗ್ಗೆ, ಪರರ ವೇಷಭೂಷಣಗಳ ಬಗ್ಗೆ, ಪರರ ಚಟುವಟಿಕೆಗಳ ಬಗ್ಗೆ ಚಿಂತೆಗೇ ನಮ್ಮ ಬಹುಪಾಲು ಸಮಯ ಮೀಸಲು!
[ಮುಂದುವರೆಯುವುದು]
ಅನುಭವದ ಮಾತುಗಳು!
ReplyDeleteಆಧ್ಯಾತ್ಮ, ಸನ್ಮಾರ್ಗ, ಒಳ್ಳೆಯತನ ಎಲ್ಲರಿಂದಲೂ ನಾವು ಬಯಸಲು ಸಾಧ್ಯವಿಲ್ಲ, ಇಂದಿನ ದಿನ ಒಂದಷ್ಟು ದುಡ್ಡುಮಾಡಬೇಕು;ಮಜಾಮಾಡಬೇಕು --ಇದೇ ಮೂಲತತ್ವಾಗಿ ಮಿಕ್ಕುಳಿದ ಎಲ್ಲವೂ ಗೌಣವಾಗಿದೆ.ಕೃಷಿಕನಿಗೂ ಕೃಷಿ ಉತ್ಫನ್ನಗಳಿಗೂ ಸಿಗುವ ಬೆಲೆಗಿಂತ ಮಧ್ಯವರ್ತಿಗಳು ಹೆಚ್ಚು ಗಳಿಸುತ್ತಿರುವುದು ವ್ಯವಹಾರದ ವಿಪರ್ಯಾಸ, ಒಮ್ಮೊಮ್ಮೆ ಅನಿಸುತ್ತದೆ: ಬಾರ್ಟರ್ ಸಿಸ್ಟಮ್ ಆದರೇ ಚೆನ್ನಾಗಿರುತ್ತಿತ್ತೇನೋ ಅಂತ, ಅನುಭವದಿಂದ ಬರೆದಿದ್ದೀರಿ, ಮುನ್ನಡೆಯಲಿ ಗಾಡಿ-ಶುಭಕೋರುತ್ತೇನೆ
ReplyDeleteಅಣ್ಣ ರಾಜುಗೆ ಮತ್ತು ಶ್ರೀ ಭಟ್ ರವರಿಗೆ ಪ್ರೋತ್ಸಾಹದ ನುಡಿಗಳಿಗಾಗಿ ಧನ್ಯವಾದಗಳು.
ReplyDelete