|| ಶ್ರೀ ರಾಮ ಜಯ ರಾಮ ಜಯ ಜಯ ರಾಮ ||

Friday, November 5, 2010

ಹೀಗೇಕೆ...??


* ಅಲಾರಾಂ ಹೊಡೆದ ನಂತರವೇ ಗಾಢ ನಿದ್ರೆ

* ಬೀರು ತುಂಬಾ ನೂರಾರು ಸೀರೆ; ಉಡುವುದು ಮಾತ್ರಾ ಸದಾ ನೈಟೀ

* ನವನವೀನ ಪಾತ್ರೆ-ಪಡಗಗಳೆಲ್ಲ ಟ್ರಂಕಿನಾ ಒಳಗೆ; ಮಸಿಹಿಡಿದ, ನುಗ್ಗು-ಜಗ್ಗಾದ ಪಾತ್ರೆಗಳು ಮಾತ್ರಾ ಅಡಿಗೆಮನೆಯೊಳಗೆ;

* ಬ್ಯಾಂಕ್ ಲಾಕರ್ ತುಂಬಾ ಚಿನ್ನದಾ ಆಭರಣಗಳು; ಜೀವನಪೂರ್ತಿ ಮೈಮೇಲೆ ಬರೀ ಥಳುಕಿನಾ ಒಡವೆಗಳು

* ಕಡಲೆಯಿದ್ದವಗೆ ಹಲ್ಲಿಲ್ಲ; ಹಲ್ಲಿದ್ದವಗೆ ಕಡಲೆಯಿಲ್ಲ - ಎರಡೂ ಇದ್ದವ ತಿನ್ನುವ ಹಾಗಿಲ್ಲ (ಮಧುಮೇಹಿಗಳಿಗೆ)

* ತಿಂಗಳಿಗೊಮ್ಮೆ ಭರಪೂರ್ತಿ ಸಂಬಳ; ಹಾಕುವುದು ಮಾತ್ರಾ ಚಿಂದಿಯಾ ಅರಿವೆ (ಈಗಿನ ಫ್ಯಾಷನ್!)

* ಹೋಟೆಲ್ ಮಾಣಿಗೆ ಟಿಪ್ಸ್ 100 ರೂಪಾಯಿ; ಭಿಕ್ಷುಕನಿಗೆ ಮಾತ್ರಾ ಒಂದೇ ರೂಪಾಯಿ!

[ಮುಂದುವರೆಯುವುದು...]

5 comments:

  1. Dear Suresh, pl. remove the 'word verification' option in this blog.

    ReplyDelete
  2. ಮುಂದುವರೆಸಿ ಸುರೇಶ್. ನಮ್ಮೆಲ್ಲರ ಮನೆಗೂ ಒಂದಲ್ಲಾ ಒಂದು ಅನ್ವಯವಾಗುತ್ತೆ.ಹಾಗಾಗಿ ನಮ್ಮನ್ನು ಕುರಿತೇ ಬರೆದದ್ದು ಎನಿಸುತ್ತೆ. ತುಂಬಾ ಚೆನ್ನಾಗಿದೆ.

    ReplyDelete
  3. ಧನ್ಯವಾದಗಳು ಶ್ರೀಧರ್. ಖಂಡಿತಾ ಪ್ರಯತ್ನಿಸುವೆ.

    ReplyDelete