|| ಶ್ರೀ ರಾಮ ಜಯ ರಾಮ ಜಯ ಜಯ ರಾಮ ||

Friday, October 29, 2010

ನೀರು ಮನೆಯೊಳಗೋ ಮನೆಯೊಳು ನೀರೋ!!!


* ಬದುಕು ಕೊನೆಯಾಗುತ್ತಿದ್ದರೂ ಧೈರ್ಯದಿಂದ ಎದುರಿಸಿ ಬದುಕುವ ಛಲವೇ?


* ಪ್ರಾಣಕ್ಕೇ ಸಂಚಕಾರ ಬಂದರೂ ಲೌಕಿಕ ವಸ್ತುಗಳ ಮೇಲೆ ಇಂಗದ ಮೋಹವೇ?


* ಪ್ರಾಪಂಚಿಕ ವಸ್ತುಗಳನ್ನು ಕೂಡಿ ಹಾಕಿ ಸ್ವತಂತ್ರದೆಡೆಗೆ ಸಾಗುವ ನಿರ್ಮೋಹವೇ?


* ಎಲ್ಲಾ ಮುಳುಗಿ ಹೋದರೂ ಪುನ: ಅಲ್ಲೇ ಬಂದು ನೆಲೆಸುವೆನೆಂಬ ಅಚಲ ನಂಬಿಕೆಯೇ?


* ನೀರು ಎಷ್ಟೇ ಮೇಲೆ ಬಂದರೂ ತಲೆಯೆತ್ತಿ ಪಾರಾಗುವೆನೆಂಬ ದೃಢ ವಿಶ್ವಾಸವೇ?



ಏನೆನ್ನಲಿ? .... ದಾಸರು ಹೇಳಿದಂತೆ -
"ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ...."

1 comment:

  1. "ನಾವು ಬಿಟ್ಟು ಹೋಗುವಂತಹ ಸಂಗತಿಗಳಿಗಾಗಿ ಜೀವನಾದ್ಯಂತ ಒದ್ದಾಡುತ್ತೇವೆ. ಹೊತ್ತೊಯ್ಯುವ ಸಂಗತಿಗಳ ಬಗ್ಗೆ ಚಿಂತಿಸುವುದೇ ಇಲ್ಲ"
    -ಸ್ವಾಮಿ ಪರಮಾನಂದ ಭಾರತಿ ಸ್ವಾಮಿಗಳ ಉಪನ್ಯಾಸದ ಒಂದು ಅಣಿಮುತ್ತು.

    ReplyDelete