ಮನಸಿನ ಭಾವನೆಗಳನ್ನು, ತುಮುಲಗಳನ್ನು, ಸಂತೋಷ, ಸುಖ-ದು:ಖಗಳನ್ನು ಇನ್ನೊಬ್ಬರೊಡನೆ ಹಂಚಿಕೊಂಡಾಗಲೇ ನೆಮ್ಮದಿ. ಆ "ಇನ್ನೊಬ್ಬರು" ಈಗ, ಅನೇಕ ಕಾರಣಗಳಿಂದ ಬಲು ದುರ್ಲಭರಾಗಿದ್ದಾರೆ. ಅಂತಹವರು ಸಿಗದಿದ್ದಾಗ ಮನಸಿನ ಭಾವನೆಗಳನ್ನು ಹೊರಹಾಕಲು ಈ ಬ್ಲಾಗಿನ ಪಯಣ - ನಿಮ್ಮೊಂದಿಗೆ.
|| ಶ್ರೀ ರಾಮ ಜಯ ರಾಮ ಜಯ ಜಯ ರಾಮ ||
Thursday, May 27, 2010
ಮನಸ್ಸಿನ ಒಂದು ಪರಿಭಾಷೆ
ಒಳಗೊಂದು ಮುಖ, ಹೊರಗೆ ನಾನಾ ಮುಖ ಒಳಗೆ ಒಂದೇ ಭಾವನೆ, ಹೊರಗೆ ಹರಿವುದು ನಾನಾ ಭಾವನೆ ಒಳಗೆಲ್ಲ ತಳಮಳ-ಕಳವಳ, ಹೊರಗೆ ಮಾತ್ರ ಫಳಫಳ ಒಳಗೆಲ್ಲ ಬರೀ ಬೇಗುದಿ, ಹೊರಗೆ ತೋರಿಕೆಯ ನೆಮ್ಮದಿ ಒಳಗಿದೆ ಎಡವಿದ ನೋವು, ಹೊರಗೆ ಮಾತ್ರ ಸತ್ಯದ ಸಾವು ನನಗಿರಲಿ ಎಲ್ಲವೂ, ಉಳಿದವರಿಗೇಕೆ ಅನ್ಯಥಾ ಎಲ್ಲವೂ?
ಚೆನ್ನಾಗಿದೆ. ಮುಂದುವರೆಸು.
ReplyDelete